Index   ವಚನ - 672    Search  
 
ಕಾಯದ ಕಳವಳದಲ್ಲಿ ಕಂಗೆಟ್ಟು, ಜೀವನುಪಾಧಿಯಲ್ಲಿ ಸುಳಿದು, ಪಂಚೇಂದ್ರಿಯಂಗಳಲ್ಲಿ ಸಂಚರಿಸಿ, ಅರಿಷಡ್‍ವರ್ಗಂಗಳಲ್ಲಿ ಹರಿದಾಡಿ, ಅಷ್ಟಮದಂಗಳಲ್ಲಿ ಕಟ್ಟುವಡೆದು, ಇಂತೀ ಅಂಗಪ್ರಕೃತಿಯ ಅಜ್ಞಾನದಲ್ಲಿ ಮಗ್ನವಾಗಿರ್ದು ಮಹಾಘನಲಿಂಗದೊಡನೆ ಸಹಭೋಜನವ ಮಾಡುವ ಮರವೆಯ ಹೀನಮಾನವರೆಲ್ಲರು ಕಲ್ಪಕಲ್ಪಾಂತರ ನರಕಸಮುದ್ರದಲ್ಲಿ ಮುಳುಗಾಡುತಿರ್ಪರು ನೋಡಾ ಅಖಂಡೇಶ್ವರಾ.