Index   ವಚನ - 688    Search  
 
ನಿಮ್ಮ ಪೂಜಿಸಿಹೆನೆಂದಡೆ ತನುವಿಲ್ಲವಯ್ಯಾ ಎನಗೆ. ಅದೇನು ಕಾರಣವೆಂದೊಡೆ, ಆ ಪೂಜಿಸುವ ತನು ನೀವೆ ಆದಿರಾಗಿ. ನಿಮ್ಮ ನೆನೆದಿಹೆನೆಂದಡೆ ಮನವಿಲ್ಲವಯ್ಯಾ ಎನಗೆ. ಅದೇನು ಕಾರಣವೆಂದೊಡೆ, ಆ ನೆನೆವ ಮನ ನೀವೆ ಆದಿರಾಗಿ. ನಿಮ್ಮ ಅರಿದಿಹೆನೆಂದಡೆ ಅರುಹುವಿಲ್ಲವಯ್ಯಾ ಎನಗೆ. ಅದೇನು ಕಾರಣವೆಂದೊಡೆ, ಆ ಅರುಹು ನೀವೇ ಆದಿರಾಗಿ. ಅಖಂಡೇಶ್ವರಾ, ನಿಮ್ಮೊಳಗೆ ನಾನು ಉರಿಯುಂಡ ಕರ್ಪುರದಂತಿರ್ದೆನಯ್ಯಾ ದೇವರದೇವಾ.