ಇಂದ್ರಚಂದ್ರರು ಪ್ರಳಯವಾಗಿ ಹೋದಡು
ಶರಣನೇನೆಂದರಿಯನು.
ಹರಿವಿರಿಂಚಿಗಳು ಪ್ರಳಯವಾಗಿ ಹೋದಡು
ಶರಣನೇನೆಂದರಿಯನು.
ದೇವ ದಾನವ ಮಾನವರು ಪ್ರಳಯವಾಗಿ ಹೋದಡು
ಶರಣನೇನೆಂದರಿಯನು.
ಮನುಮುನಿಗಳು ಪ್ರಳಯವಾಗಿ ಹೋದಡು
ಶರಣನೇನೆಂದರಿಯನು.
ಪಂಚತತ್ತ್ವ ಬ್ರಹ್ಮಾಂಡಕೋಟಿಗಳು
ಪ್ರಳಯವಾಗಿ ಹೋದಡು
ಅಖಂಡೇಶ್ವರಾ, ನಿಮ್ಮ ಶರಣನೇನೆಂದರಿಯನಯ್ಯಾ.
Art
Manuscript
Music
Courtesy:
Transliteration
Indracandraru praḷayavāgi hōdaḍu
śaraṇanēnendariyanu.
Harivirin̄cigaḷu praḷayavāgi hōdaḍu
śaraṇanēnendariyanu.
Dēva dānava mānavaru praḷayavāgi hōdaḍu
śaraṇanēnendariyanu.
Manumunigaḷu praḷayavāgi hōdaḍu
śaraṇanēnendariyanu.
Pan̄catattva brahmāṇḍakōṭigaḷu
praḷayavāgi hōdaḍu
akhaṇḍēśvarā, nim'ma śaraṇanēnendariyanayyā.