Index   ವಚನ - 701    Search  
 
ಘನಕ್ಕೆ ಘನವಾದ ಮಹಾಘನವಸ್ತುವಿನಲ್ಲಿ ಮನವಡಗಿದ ಮಹಾಮಹಿಮಂಗೆಂಬುದಿಲ್ಲ. ನೆನೆದು ಧ್ಯಾನಿಸಬೇಕೆಂಬುದಿಲ್ಲ. ಧ್ಯಾನಿಸಿ ಕಾಣಬೇಕೆಂಬುದಿಲ್ಲ. ಕಂಡು ಕೂಡಬೇಕೆಂಬುದಿಲ್ಲ. ಅಖಂಡೇಶ್ವರಾ, ನಿಮ್ಮನೊಡಗೂಡಿದ ಶರಣಂಗೆ ಏನೆಂದೆನಲಿಲ್ಲ.