ವಚನ - 1191     
 
ಜಾತಿ ಜಂಗಮ ಒಂದು ಕೋಟಾನುಕೋಟಿ, ನೀತಿಜಂಗಮ ಒಂದು ಕೋಟಾನುಕೋಟಿ, ಸಿದ್ಧಜಂಗಮ ಒಂದು ಕೋಟಾನುಕೋಟಿ, ಜ್ಞಾನಜಂಗಮ ತ್ರೈಲೋಕ ದುರ್ಲಭ ಗುಹೇಶ್ವರಾ.