Index   ವಚನ - 54    Search  
 
ಇಂದ್ರನ ಮೈಯ ಯೋನಿಯ ಮಾಡಿತ್ತು ಮಾಯೆ. ಬ್ರಹ್ಮನ ತಲೆಯ ಕಳೆಯಿತ್ತು ಮಾಯೆ. ವಿಷ್ಣುವಿನ ಕಷ್ಟಬಡಿಸಿತ್ತು ಮಾಯೆ. ಚಂದ್ರನ ಕ್ಷಯರೋಗಿಯ ಮಾಡಿತ್ತು ಮಾಯೆ. ರವಿಯ ಕುಷ್ಠನ ಮಾಡಿತ್ತು ಮಾಯೆ. ಈ ಮಾಯೆಯೆಂಬ ವಿಧಿ ಆರಾರನೂ ಕೆಡಿಸಿತ್ತು ನೋಡ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.