ಹತ್ತುವಾಯು ಹರಿದಾಡಿ ಆನೊಳ ಸುತ್ತಿ ಸುತ್ತಿ
ಕೃತ್ಯದಿಂದ ನರಳಿಸಿ ಒರಲಿಸಿ ಚೇತರಿಸಿ ಆವರಿಸಿ ಕಾಡುತಿದೆ.
ಅದು ಎಂತೆಂದೊಡೆ:
ಅರೆಗಾಯವಡೆದ ಉರಗಗೆ ಇರುವೆ ಮುಕುರುವಂತೆ,
ದಶವಾಯುಗಳ ಮುಖದಲ್ಲಿ ಹರಿವ ಕರಣೇಂದ್ರಿಯಂಗಳು
ಮನವೆಂಬ ಅರೆಗಾಯದ ಸರ್ಪಂಗೆ ಮುಕುರಿ
ನರಳಿ[ಸಿ] ಕಾಡುತಿವೆ; ಕಾಡಿದರೇನು?
ಹಲವು ಬಗೆಯಲ್ಲಿ ಹರಿವ ವಾಯುಮುಖದಲ್ಲಿ ನೀನೆ;
ನೀನಲ್ಲದನ್ಯವಿಲ್ಲ .
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Hattuvāyu haridāḍi ānoḷa sutti sutti
kr̥tyadinda naraḷisi oralisi cētarisi āvarisi kāḍutide.
Adu entendoḍe:
Aregāyavaḍeda uragage iruve mukuruvante,
daśavāyugaḷa mukhadalli hariva karaṇēndriyaṅgaḷu
manavemba aregāyada sarpaṅge mukuri
naraḷi[si] kāḍutive; kāḍidarēnu?
Halavu bageyalli hariva vāyumukhadalli nīne;
nīnalladan'yavilla.
Paramaguru paḍuviḍi sid'dhamallināthaprabhuve.