Index   ವಚನ - 92    Search  
 
ಕರಿಯ ಕಾಲೊಳಗೆ ಸಿಕ್ಕಿದ ಮರಿಯ ನಾಯಿಯಂತೆ, ಅಷ್ಟಮದವೆಂಬ ಕರಿಯ ಕಾಲೊಳಗೆನ್ನ ಸಿಗಿಸಿ, ಮೆಟ್ಟಿ ಮೆಟ್ಟಿ ತುಳಿಸುತ್ತಿದ್ದೆಯಲ್ಲ! ಅರಸಿನ ಉಪ್ಪನುಂಡು ಆನೆ ಸೇನೆ ದಳ ಅರಸ[ನ] ಕೈಸೆರೆ ಹಿಡಿವಂತೆ, ಎನ್ನಾತ್ಮದಲ್ಲಿ ಹುಟ್ಟಿದ ಮದ, ಎನ್ನನೆ ತಿಂದು ತೇಗುತ್ತಿದ್ದವಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.