ಅರಿಷಡುವರ್ಗವೆಂಬ ಕರ್ಮಿಯ ಬಲಿಯೊಳಿಂಬು
ಗುರು ನೀ ಮಾಡಲಿಬೇಡ ಗುಪ್ತದಿಂದಲೆನ್ನ ಕೂಡೆ.
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದ ಡಂಬು
ಈ ಮಹಾಬಲೆಯೊಳಿಟ್ಟು ನೀ ಮುನ್ನಗಲಿದೆ ದಿಟ
ತಾಮಸಗುಣವನಳಿದು ಆ ಮಹಾಜ್ಞಾನದೊಳುಳಿದು
ಭೂಮಿಯೊಳಗಿಪ್ಪ ಗಣಸ್ತೋಮದ ಪದಕ್ಕೆ ನಮೋಯೆಂದು ಶರಣು. | 1 |
ಕರಿಯ ಸೊಂಡಿಲ ಮುರಿದು ವ್ಯಾಘ್ರನ ಶಿರವನರಿದು
ಉರಗನ ಹೆಡೆಯ ಮೆಟ್ಟಿ ಸಿಂಹನ ಉರಿಯೊಳಿಟ್ಟು
ಮರೆಯ ಕಣ್ಣ ಕಳದು ಭಲ್ಲೂಕನ ಕರದು
ಇರಬಲ್ಲಡಾತನೆ ಸತ್ಯ ಈ ಭುವನದೊಳಗೆ ನಿತ್ಯ. | 2 |
ಪರಮನ ಲಿಂಗಮುಖವಾಗಿ ಸತ್ಯಸಂಗ
ಶರಣ ನಿರ್ಮಲದೇಹಿ ಸರ್ವಗಣಕೆಲ್ಲ ಮೋಹಿ
ಗುರು ಪಡುವಿಡಿ ಸಿದ್ಧವರಮಲ್ಲಿನಾಥನೊಳಿರ್ದು
ಹೆರೆಹಿಂಗದಿಪ್ಪ ಜಾಣ ಮೂರುಲೋಕಪ್ರವೀಣ. | 3 |
Art
Manuscript
Music
Courtesy:
Transliteration
Ariṣaḍuvargavemba karmiya baliyoḷimbu
guru nī māḍalibēḍa guptadindalenna kūḍe.
Kāma krōdha lōbha mōha mada matsarada ḍambu
ī mahābaleyoḷiṭṭu nī munnagalide diṭa
tāmasaguṇavanaḷidu ā mahājñānadoḷuḷidu
bhūmiyoḷagippa gaṇastōmada padakke namōyendu śaraṇu. | 1 |
Kariya soṇḍila muridu vyāghrana śiravanaridu
uragana heḍeya meṭṭi sinhana uriyoḷiṭṭu
mareya kaṇṇa kaḷadu bhallūkana karadu
Iraballaḍātane satya ī bhuvanadoḷage nitya. | 2 |
Paramana liṅgamukhavāgi satyasaṅga
śaraṇa nirmaladēhi sarvagaṇakella mōhi
guru paḍuviḍi sid'dhavaramallināthanoḷirdu
herehiṅgadippa jāṇa mūrulōkapravīṇa. | 3 |
ಸ್ಥಲ -
ಅರಿಷಡುವರ್ಗ ನಿರಸನಸ್ಥಲ