ಆಸೆ ಮಾಡದಿರು ಅಧಮ ಚಾಂಡಾಲಿ ನರರಿಂಗೆ.
ಆಸೆಗೈಯದಿರು
ಹೊನ್ನು ಹೆಣ್ಣು ಮಣ್ಣಿನ ಮದದಮಲು
ತಲೆಗೇರಿದ ಪಿಸುಣಿ ಮಾನವರ.
ಆಸೆಗೈಯದಿರು ಪಾಪಿ ಮನವೆ.
ಆಸೆಗೈ ಆಸೆಗೈ ಇನ್ನೊಮ್ಮೆ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ
ಸಮುದ್ರವನಾಸೆಗೈದರೆ ಹವಳ ಮುತ್ತನುಗಿವುದು.
Art
Manuscript
Music
Courtesy:
Transliteration
Āse māḍadiru adhama cāṇḍāli narariṅge.
Āsegaiyadiru
honnu heṇṇu maṇṇina madadamalu
talegērida pisuṇi mānavara.
Āsegaiyadiru pāpi manave.
Āsegai āsegai innom'me
paramaguru paḍuviḍi sid'dhamallināthaprabhuvemba
samudravanāsegaidare havaḷa muttanugivudu.