Index   ವಚನ - 165    Search  
 
ಕ್ಷೀರವನೊಲ್ಲದೆ ಹಂಸ ನೀದಂಗೆ ಹರಿವಂತೆ, ಕಮಲದ ಪರಿಮಳವನೊಲ್ಲದ ತುಂಬಿ ದತ್ತೂರ ಕುಸುಮಕ್ಕೆ ಹರಿವಂತೆ, ನಿನ್ನಸಂಗದಿಂದಾದ ತನುಮನ ನಿನ್ನನರಿಯದೆ ಸಂಸಾರಸಂಗಕ್ಕೆಳಸುವವು; ಇದಕಿನ್ನೆಂತೂ ಶಿವನೆ! ನೀನೊಡ್ಡಿದ ಸಂಸಾರಬಂಧನವ ನೀನೆ ಪರಹರಿಸಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.