Index   ವಚನ - 188    Search  
 
ಹಳ್ಳದೊಳು ತೇಲಿಹೋಗುವ ಕಂಬಕೆ ತೊರೆನೆರೆಗಳು ಮುಸುಕಿ ಹೋಗುತಿದೆ ನೋಡಾ! ತೊರೆನೆರೆಗಳ ಸಂಭ್ರಮದಲ್ಲಿ ಹೋಗುವ ಸ್ತಂಭ ಆರಿಗೆ ಕಾಣಬಾರದು ನೋಡಾ! ಹಳ್ಳವ ಬತ್ತಿಸೆ, ತೊರೆನೆರೆಗಳ ಕೆಡಿಸಿ, ಹಳ್ಳದೊಳಿಹ ಕಂಬದೊಳಿಪ್ಪ ಮಾಣಿಕ್ಯವ ಸಾಧಿಸಿಕೊಳಬಲ್ಲರೆ ನಿಃಸಂಸಾರಿ ನಿರಾಭಾರಿ ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.