Index   ವಚನ - 196    Search  
 
ಹಡಗ ಹರಿಗೋಲ ನಂಬಿದವರು ಕಡಲತೊರೆ ದಾಂಟರೇನಯ್ಯಾ? ಧನು ಖಡ್ಗವ ಪಿಡಿದು ಕಾಳಗವ ಮಾಡಿದವರು ರಣವ ಗೆಲ್ಲರೇನಯ್ಯಾ? ಗುರುವ ನಂಬಿದವರು ಭವವ ಗೆಲ್ಲರೇನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ?