ಗುರುವೆ ಬೇರೆ ಹರ ಬೇರೆಯೆಂಬ
ಕುನ್ನಿ ಮಾನವ ನೀ ಕೇಳು.
ಗುರು ಬೇರಲ್ಲ, ಹರ ಬೇರಲ್ಲ ;
ಗುರುವೂ ಹರನೂ ಒಂದೇ.
ಗುರು ಕಿರಿದ ಮಾಡಿ,
ಹರನ ಹಿರಿದು ಮಾಡಬಾರದು.
ಹರನ ಕಿರಿದು ಮಾಡಿ,
ಗುರುವ ಹಿರಿದು ಮಾಡಬಾರದು.
ಪಾರ್ವತಿಯೊಳು ಪರಮೇಶ
ಗುರುವಿನ ಮಹಿಮೆ ಹೇಳಿದ.
ಕೇಳರಿಯಾ ಮನುಜ?
ಅದು ಎಂತೆಂದರೆ.
ಗುರುದೇವನು ಮಹಾದೇವನು,
ಗುರುದೇವನೆ ಸದಾಶಿವನು,
ಗುರುವಿಂದ ಪರವಿನ್ನಾವುದೂ ಇಲ್ಲ.
ಸಾಕ್ಷಿ:
ಗುರುದೇವೋ ಮಹಾದೇವೋ ಗುರುದೇವಃ ಸದಾಶಿವಃ |
ಗುರುದೈವಾತ್ ಪರನ್ನಾಸ್ತಿ ತಸ್ಮೈ ಶ್ರೀಗುರುವೇ ನಮಃ ||
ಎಂದುದಾಗಿ,
ಹೀಗೆಂಬ ಗುರುವ ಮರೆದಾಗಳೆ ಭವಮಾಲೆ ತಪ್ಪದಯ್ಯಾ,
[ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ].
Art
Manuscript
Music
Courtesy:
Transliteration
Guruve bēre hara bēreyemba
kunni mānava nī kēḷu.
Guru bēralla, hara bēralla;
guruvū haranū ondē.
Guru kirida māḍi,
harana hiridu māḍabāradu.
Harana kiridu māḍi,
guruva hiridu māḍabāradu.
Pārvatiyoḷu paramēśa
guruvina mahime hēḷida.
Kēḷariyā manuja?
Adu entendare.
Gurudēvanu mahādēvanu,
gurudēvane sadāśivanu,
guruvinda paravinnāvudū illa.
Sākṣi:
Gurudēvō mahādēvō gurudēvaḥ sadāśivaḥ |
gurudaivāt parannāsti tasmai śrīguruvē namaḥ ||
endudāgi,
hīgemba guruva maredāgaḷe bhavamāle tappadayyā,
[paramaguru paḍuviḍi sid'dhamallināthaprabhuve].