Index   ವಚನ - 207    Search  
 
ಗುರುದೀಕ್ಷೆಯ ಪಡೆದು, ಗುರುಲಿಂಗವ ಶಿರದಲ್ಲಿ ಧರಿಸಿ, ಗುರುಮಂತ್ರವ ಕರ್ಣದಲ್ಲಿ ಕೇಳಿ, ಗುರುಕುಮಾರ ತಾನಾಗಿ, ಮುಂಡೆಗೆ ಮುತ್ತೈದೆತನ ಬಂದಂತೆ ಭವದಂಡಲೆಯ ಕಳೆದು, ಶಿವಭಕ್ತನ ಮಾಡಿದ ಗುರುದೈವವನರಿಯದೆ, ಅನ್ಯದೈವವ ಹೊಗಳುವ ಕುನ್ನಿ ಮಾನವ ನೀ ಕೇಳಾ! ಗುರುದೇವರಲ್ಲದನ್ಯದೇವರ ಹೊಗಳಿದರೆ ನರಕವೆಂಬುದನರಿಯಾ. ಗುರುವೆ ಪರಬ್ರಹ್ಮ, ಪರಶಿವ. ಗುರುವಿನಿಂದ ಪರಮಾತ್ಮನ ನೆನಹು ಅಂಗದೊಳು ನೆಲೆಗೊಂಡಿತಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.