ಹರಸ್ರಾವದಲ್ಲಿ ಹುಟ್ಟಿ ನರಸ್ರಾವವ ನೆನೆವ
ಭಂಡರನೆನಗೊಮ್ಮೆ ತೋರದಿರಯ್ಯಾ!
ಹರಸ್ರಾವವೆಂದರೆ-ಗುರುವಿನ ಕರಕಮಲದಲ್ಲಿ ಹುಟ್ಟಿ
ನರರ ತಂದೆತಾಯಿಗಳೆನಬಹುದೆ? ಎನಲಾಗದು.
ನಿಮಗೆ ತಂದೆ ತಾಯಿಗಳೆಂದರೆ ಹೇಳುವೆ ಕೇಳಿರೊ.
ಗುರುವೆ ತಾಯಿ, ಗುರುವೆ ತಂದೆ, ಗುರುವೆ ಬಂಧು,
ಗುರುವೆ ಬಳಗ, ಗುರುವಿನಿಂದ
ಅಧಿಕವಾಗಿಪ್ಪರು ಇನ್ನಾರೂ ಇಲ್ಲ.
ಸಾಕ್ಷಿ:
ಗುರುರ್ಮಾತಾ ಗುರುಃಪಿತಾ ಗುರುಶ್ಚ ಬಂಧುರೇವ ಚ |
ಗುರುದೈವಾತ್ ಪರಂ ನಾಸ್ತಿ ತಸ್ಮೈ ಶ್ರೀ ಗುರುವೇ ನಮಃ ||''
ಎಂದುದಾಗಿ,
ಗುರುಪುತ್ರನಾಗಿ ನರರ ಹೆಸರ ಹೇಳುವ
ನರಕಜೀವಿಯನೆನಗೊಮ್ಮೆ ತೋರದಿರಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Harasrāvadalli huṭṭi narasrāvava neneva
bhaṇḍaranenagom'me tōradirayyā!
Harasrāvavendare-guruvina karakamaladalli huṭṭi
narara tandetāyigaḷenabahude? Enalāgadu.
Nimage tande tāyigaḷendare hēḷuve kēḷiro.
Guruve tāyi, guruve tande, guruve bandhu,
guruve baḷaga, guruvininda
adhikavāgipparu innārū illa.
Sākṣi:
Gururmātā guruḥpitā guruśca bandhurēva ca |
gurudaivāt paraṁ nāsti tasmai śrī guruvē namaḥ ||''
endudāgi,
guruputranāgi narara hesara hēḷuva
narakajīviyanenagom'me tōradirayyā
paramaguru paḍuviḍi sid'dhamallināthaprabhuve.