Index   ವಚನ - 209    Search  
 
ಗುರು ನರನೆಂದು, ಸತ್ತನುಕೆಟ್ಟನುಯೆಂಬ ನರಕಜೀವಿ ನೀ ಕೇಳಾ. ಗುರು ಸತ್ತರೆ ಜಗವುಳಿಯಬಲ್ಲುದೆ? ಗುರು ಅಳಿವವನೂ ಅಲ್ಲ, ಉಳಿವವನೂ ಅಲ್ಲ. ಸಾಕ್ಷಿ: ಸ್ಥಾವರ ಜಂಗಮಾದರಂ ನಿರ್ಮಾಲ್ಯೇ ಸ್ಥಿರಮೇವ ಚ | (?) ಜ್ಞಾನವಂದಿತಪಾದಾಯ ತಸ್ಮೈ ಶ್ರೀಗುರುವೇ ನಮಃ ||'' ಎಂದುದಾಗಿ, ಗುರು ಸತ್ತ, ಕೆಟ್ಟ ಎಂದು ಬಸುರ ಹೊಯಿದುಕೊಂಡು ಅಳುತಿಪ್ಪ ಕುರಿಮಾನವರಿಂಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕ ಪ್ರಸಾದವಿಲ್ಲವಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.