Index   ವಚನ - 212    Search  
 
ಗುರು ಸಹಜವಾಗಿರೆ, ಶಿಷ್ಯ ಸತ್ಯ ಪವಾಡಪುರುಷನಾದರೂ ಆಗಲಿ. ಶಿಷ್ಯನ ಭಾವಕ್ಕೆ ಗುರು ಹೆಚ್ಚಲ್ಲದೆ, ಗುರುವಿನ ಭಾವಕ್ಕೆ ಶಿಷ್ಯ ಹೆಚ್ಚೇ? 'ನಾ ಪವಾಡಪುರುಷ, ಗುರು ಸಹಜಮಾನವ ಭಾವ' ಎಂಬ ಅಂಗದೊಳು ಹುಟ್ಟಿತಾದರೆ ಇಪ್ಪತ್ತೆಂಟುಕೋಟಿ ನರಕದಲ್ಲಿಕ್ಕುವ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.