Index   ವಚನ - 211    Search  
 
ಗುರು ಸಂಸಾರಿ, ಶಿಷ್ಯ ಯತಿಯಾದರೇನಯ್ಯಾ! ಗುನುವಿನೆಡೆಗೆ ಶಿಷ್ಯ ಭಕ್ತಿ ಕಿಂಕುರ್ವಾಣವಿರಬೇಕಯ್ಯಾ. ಇಲ್ಲದ ಅಹಂಕಾರದಲ್ಲಿ 'ನಾ ಯತಿ, ಗುರು ಸಂಸಾರಿ' ಎಂಬ ಭಾವ ಅಂಗದೊಳು ಹೊಳೆದರೆ ಕೂಗಿಡೆ ಕೂಗಿಡೆ ನರಕದಲ್ಲಿಕ್ಕುವ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.