Index   ವಚನ - 216    Search  
 
ಗುರುವರಿಯದವನೆಂದುದಾಸೀನವ ಮಾಡಿ ನೆರೆ ಬಲ್ಲವರನರಸಿ, ಭಕ್ತಿಯ ಮಾಡುವ ಪಾಪಿ ಮಾನವ ನೀ ಕೇಳು. ಸಾಕ್ಷಿ: ಗುರೌ ಸನ್ನಿಹಿತೇ ಯಸ್ತು ಪೂಜಾಯಾಮನ್ಯಮಾನಸಃ | ಸ ಪಾಪೀ ನರಕಂ ಯಾತಿ ಕಾಲಸೂತ್ರಮಿವೋತ್ಸರೇತ್ ||'' ಎಂದುದಾಗಿ, ಗುರುವರಿಯದವನೂ ಅಲ್ಲ, ಬಲ್ಲವನೂ ಅಲ್ಲ. ಗುರು ನಿರಂಜನ, ಗುರು ಪರಶಿವ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.