Index   ವಚನ - 221    Search  
 
ಬೀರ ಜಟ್ಟಿ ಮೈಲಾರ ಮಾರಿ ಮಸಣೆಯೆಂಬ ಅನ್ಯದೈವವು ಮನೆಯೊಳಿರುತಿರೆ, ಅದ ವಿಚಾರಿಸದೆ, ನಿನ್ನ ಚಿತ್ಕಳೆ ಪರಬ್ರಹ್ಮಲಿಂಗವನವರಿಗೆ ಕೊಟ್ಟು, ಹೊನ್ನು ಹಣವ ಬೇಡಿ ಕೊಂಡು ಒಡಲ ಹೊರೆದು ಗುರುವೆಂದುಕೊಂಬ ಗುರುವೆ ನೀ ಕೇಳಾ. ವಿಚಾರಹೀನರಿಗೆ ಉಪದೇಶವ ಕೊಟ್ಟರೆ ಅವಿಚಾರಿ ನೀನಹುದನರಿಯಾ? ಸಾಕ್ಷಿ: ಅನ್ಯದೈವಪೂಜಕಸ್ಯ ಗುರೋರುಪದೇಶಃ ನಾಸ್ತಿ ನಾಸ್ತಿ | ಅವಿಚಾರಂ ತದೀಕ್ಷಣಾತ್ ರೌರವಂ ನರಕಂ ವ್ರಜೇತ್ ||'' ಎಂದುದಾಗಿ, ಮುನ್ನ ಯಮಪಾತಕಕೆ ಗುರಿಯಾಗುವ ಸಂದೇಹಿಗಳ ಗುರು ಶಿಷ್ಯ ಸಂಬಂಧವ ಕಂಡು ನಸುನಗುತ್ತಿದ್ದನಯ್ಯಾ ನಮ್ಮ ಪರುಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.