Index   ವಚನ - 228    Search  
 
ಬಡವನೆಡವಿ ಧನವ ಕಂಡಂತೆ, ಭವಪಡುವನ ಕರದೊಳು ಮೃಡಮೂರ್ತಿಲಿಂಗವ ಕಂಡೆನಲ್ಲ | ಬಿಡದೆ ಅರಸುವ ಬಳ್ಳಿ ಕಾಲತೊಡರಿ ಬಂದಂತೆ ಭವಭವಾಂತರದಲರಸಿದರೂ ಕಾಣದ ಕಾಲಸಂಹರದೊಡೆಯನ ಕಂಡೆನಲ್ಲ ಎನ್ನ ಕರದೊಳು! ವೇದಾತೀತ ನಿರಂಜನನೆಂಬ ಲಿಂಗವ ಕಂಡೆನಲ್ಲ ಎನ್ನ ಕರದೊಳು! ಹರಿಯಜರ ಮಧ್ಯದಲ್ಲಿ ಉರಿವುತಿಹ ಪರಂಜ್ಯೋತಿಲಿಂಗನ ಕಂಡೆನಲ್ಲ ಎನ್ನ ಕರದೊಳು! ಕಂಡು ಕಂಡು ಬಿಡಲಾರದ ಸುವಸ್ತುವ ಕಂಡೆನಲ್ಲ ಎನ್ನ ಕರದೊಳು. ಆಹಾ ಎನ್ನ ಪುಣ್ಯವೆ! ಆಹಾ ಎನ್ನ ಭಾಗ್ಯವೆ! ಆಹಾ ಎನ್ನ ಪ್ರಾಣದ ನಲ್ಲನೆಂಬ ಪರಮಾತ್ಮಲಿಂಗವನಪ್ಪಿ ಅಗಲದಂತೆ ಮಾಡು ಕಂಡ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.