ಜ್ಯೋತಿ ಇದ್ದ ಗೃಹಕ್ಕೆ ತಮವುಂಟೇನಯ್ಯಾ?
ಪರಂಜ್ಯೋತಿಲಿಂಗದ ಸಂಗದ ಬೆಳಗಲಿಹ ಮಹಾತ್ಮನಿಗೆ
ಮಾಯಾತಮಂಧದ ಭೀತಿಯುಂಟೇನಯ್ಯಾ?
ಕಂಠೀರವನಿಹ ವನದೊಳು ಕರಿವುಂಟೇನಯ್ಯಾ?
ಲಿಂಗವೆಂಬ ಸಿಂಹದ ಮರೆಯಬಿದ್ದಾತಂಗೆ
ಅಷ್ಟಮದವೆಂಬ ಕರಿಯ ಭಯವುಂಟೇನಯ್ಯಾ?
ಗರುಡನಿದ್ದ ಸ್ಥಾನದಲ್ಲಿಗೆ ಉರಗನ ಭಯವುಂಟೇನಯ್ಯಾ?
ಪರಮಾತ್ಮನೊಳುಬೆರೆದ ನಿಬ್ಬೆರಗಿ ಶರಣಂಗೆ
ಕುಂಡಲಿಸರ್ಪನ ಭಯವುಂಟೇನಯ್ಯಾ?
ಆನೆಯ ಮೇಲೆ ಹೋಗುವ
ಮಾನವನಿಗೆ ಶ್ವಾನನ ಭಯವುಂಟೇನಯ್ಯಾ?
ಲಿಂಗಾಂಗಸಮರಸವೆಂಬ ಮದ ತಲೆಗೇರಿ ಹೋಗುವ
ಶಿವಶರಣಂಗೆ ಪಂಚೇಂದ್ರಿಯವೆಂಬ
ಶ್ವಾನನ ಭಯವುಂಟೇನಯ್ಯಾ?
ಉರಿವುತಿಹ ಅಗ್ನಿಗೆ ಸೀತದ ಭಯವುಂಟೇನಯ್ಯಾ?
ಗುರುಕರುಣಾಗ್ನಿಯಲ್ಲಿ ಭವದಗ್ಧನಾದ ಶರಣಂಗೆ
ಅನ್ಯಭಯಭೀತಿಯ ಚಳಿ ಉಂಟೇನಯ್ಯಾ?
ಉರಗಮುಟ್ಟಲು ಸರ್ವಾಂಗವನೆಲ್ಲ ವಿಷಕೊಂಡಂತೆ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ
ಲಿಂಗಸೋಂಕಿದವರೆಲ್ಲ
ಸರ್ವಾಂಗಲಿಂಗಿಗಳಾದುದ ನೋಡಾ.
Art
Manuscript
Music
Courtesy:
Transliteration
Jyōti idda gr̥hakke tamavuṇṭēnayyā?
Paran̄jyōtiliṅgada saṅgada beḷagaliha mahātmanige
māyātamandhada bhītiyuṇṭēnayyā?
Kaṇṭhīravaniha vanadoḷu karivuṇṭēnayyā?
Liṅgavemba sinhada mareyabiddātaṅge
aṣṭamadavemba kariya bhayavuṇṭēnayyā?
Garuḍanidda sthānadallige uragana bhayavuṇṭēnayyā?
Paramātmanoḷubereda nibberagi śaraṇaṅge
kuṇḍalisarpana bhayavuṇṭēnayyā?
Āneya mēle hōguva
Mānavanige śvānana bhayavuṇṭēnayyā?
Liṅgāṅgasamarasavemba mada talegēri hōguva
śivaśaraṇaṅge pan̄cēndriyavemba
śvānana bhayavuṇṭēnayyā?
Urivutiha agnige sītada bhayavuṇṭēnayyā?
Gurukaruṇāgniyalli bhavadagdhanāda śaraṇaṅge
an'yabhayabhītiya caḷi uṇṭēnayyā?
Uragamuṭṭalu sarvāṅgavanella viṣakoṇḍante
paramaguru paḍuviḍi sid'dhamallināthaprabhuvemba
liṅgasōṅkidavarella
sarvāṅgaliṅgigaḷāduda nōḍā.