ಶಿವಾಚಾರಸಂಪನ್ನನಾಗಿ ಶಿವಭಕ್ತನೆನಿಸಿಕೊಂಡು
ಶಿವಲಿಂಗವು ಕರಸ್ಥಲ ಉರಸ್ಥಲ ಶಿರಸ್ಥಲದಲ್ಲಿರುತಿರೆ
ಅದ ಮರೆದು, ಹಲವು ದೇವರ ಪೂಜೆಮಾಡಿ,
ಹಲವು ದೇವರ ಬಳಿಯಲ್ಲಿ ನೀರ ಕುಡಿದು,
ಹಲವು ದೇವರ ನೈವೇದ್ಯವ ತಿಂಬ ಹೊಲೆಯನ
ಶಿವಭಕ್ತನೆನಬಹುದೆ? ಎನಲಾಗದು.
ಅದೇನು ಕಾರಣವೆಂದಡೆ, ಅದಕ್ಕೆ ಸಾಕ್ಷಿ:
ಶಿವಾಚಾರೇಣ ಸಂಪನ್ನಃ ಪ್ರಸಾದಂ ಭುಂಜತೇ ಯದಿ |
ಅಪ್ರಸಾದೀ ಅನಾಚಾರೀ ಸರ್ವಭಕ್ತಶ್ಚ ವಾಯಸಃ ||''
ಎಂಬುದನರಿಯದೆ,
ಮತ್ತೆ ಕೇಳು ಗ್ರಂಥ ಸಾಕ್ಷಿಯ ಮನುಜ :
ಸಾಕ್ಷಿ:
“ಲಿಂಗಾರ್ಚನೈಕ ಪರಾಣಾಂ ಅನ್ಯದೈವಂತು ಪೂಜನಂ |
ಶ್ವಾನಯೋನಿಶತಂ ಗತ್ವಾ ರೌರವಂ ನರಕಂ ವ್ರಜೇತ್ ||''
ಎಂಬುದನರಿಯದೆ, ಮತ್ತೆ ಮೇಣ್,
ಸಾಕ್ಷಿ:
“ಶಿವಲಿಂಗಂ ಪರಿತ್ಯಜ್ಯ ಅನ್ಯದೈವಮುಪಾಸತೇ |
ಪ್ರಸಾದಂ ನಿಷ್ಫಲಂ ಚೈವ ರೌರವಂ ನರಕಂ ವ್ರಜೇತ್ ||''
ಹೀಗೆಂಬುದನರಿಯದೆ,
ಲಿಂಗವಿದ್ದು ಅನ್ಯದೈವಂಗಳಿಗೆರಗಿ, ಆಚಾರಭ್ರಷ್ಟನಾಗಿ
ಪಾದೋದಕ ಪ್ರಸಾದವ ಕೊಂಡರೆ ಎಂದೆಂದಿಗೂ ಭವಹಿಂಗದು.
ಅದೇನುಕಾರಣ ಹಿಂಗದೆಂದರೆ ಹೇಳುವೆ ಕೇಳಿರಣ್ಣಾ:
ಹೆಗ್ಗಣವನೊಳ ಹೋಗಿಸಿ ನೆಲಗಟ್ಟ ಹೊರೆದಂತೆ,
ಅನ್ಯಕೆ ಹರಿವ ದುರ್ಗುಣವ ಕೆಡೆಮೆಟ್ಟದೆ
ಶಿವಭಕ್ತರೆಂದೆಂದು ನುಡಿದುಕೊಂಡು ನಡೆದರೆ,
ಹಂದಿ ನಾಯಿ ನರಿ ವಾಯಸನ ಜನ್ಮ ತಪ್ಪದೆಂದಾತ
ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Śivācārasampannanāgi śivabhaktanenisikoṇḍu
śivaliṅgavu karasthala urasthala śirasthaladallirutire
ada maredu, halavu dēvara pūjemāḍi,
halavu dēvara baḷiyalli nīra kuḍidu,
halavu dēvara naivēdyava timba holeyana
śivabhaktanenabahude? Enalāgadu.
Adēnu kāraṇavendaḍe, adakke sākṣi:
Śivācārēṇa sampannaḥ prasādaṁ bhun̄jatē yadi |
aprasādī anācārī sarvabhaktaśca vāyasaḥ ||''
embudanariyade,
matte kēḷu grantha sākṣiya manuja:
Sākṣi:“Liṅgārcanaika parāṇāṁ an'yadaivantu pūjanaṁ |
śvānayōniśataṁ gatvā rauravaṁ narakaṁ vrajēt ||''
embudanariyade, matte mēṇ,
sākṣi:
“Śivaliṅgaṁ parityajya an'yadaivamupāsatē |
prasādaṁ niṣphalaṁ caiva rauravaṁ narakaṁ vrajēt ||''
hīgembudanariyade,
liṅgaviddu an'yadaivaṅgaḷigeragi, ācārabhraṣṭanāgi
pādōdaka prasādava koṇḍare endendigū bhavahiṅgadu.Adēnukāraṇa hiṅgadendare hēḷuve kēḷiraṇṇā:
Heggaṇavanoḷa hōgisi nelagaṭṭa horedante,
an'yake hariva durguṇava keḍemeṭṭade
śivabhaktarendendu nuḍidukoṇḍu naḍedare,
handi nāyi nari vāyasana janma tappadendāta
nam'ma paramaguru paḍuviḍi sid'dhamallināthaprabhuve.