ಇಷ್ಟಲಿಂಗವ ಮರೆದು ಬರಿಯ ಕಲ್ಲಿಗೆರಗುವ
ಭ್ರಷ್ಟಂಗಿನ್ನೆಲ್ಲಿಯ ಶಿವಾಚಾರವಯ್ಯಾ!
ಖಡ್ಗವ ಬಿಟ್ಟು ಕೋಲುವಿಡಿದು ಕಾಳಗವ ಮಾಡಿದರೆ
ತಲೆ ಹೋಗುವುದನರಿಯಾ ಮನುಜ.
ಲಿಂಗವ ಬಿಟ್ಟು ಅನ್ಯಲಿಂಗವ ಪೂಜೆಮಾಡಿದರೆ
ನರಕವೆಂಬುದನರಿಯಾ ಪಾಪಿ.
ಸಾಕ್ಷಿ:
“ಇಷ್ಟಲಿಂಗೇ ಪರೇತ್ ಚ ಭಾವಾದನ್ಯತ್ರ ಗಚ್ಛತಿ |
ಸ ಕಿಲ್ಬಿಷಮವಾಪ್ನೋತಿ ಪೂಜಯನ್ ನಿಃಫಲೋ ಭವೇತ್||''
ಎಂಬ ವಚನವನರಿಯದೆ ಮುಂದುಗಾಣದನ್ಯದೈವಕೆರಗುವ
ಅಂಧಕರಿಗೆಂದೆಂದು ಭವಹಿಂಗದೆಂದಾತ ನಮ್ಮ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Iṣṭaliṅgava maredu bariya kalligeraguva
bhraṣṭaṅginnelliya śivācāravayyā!
Khaḍgava biṭṭu kōluviḍidu kāḷagava māḍidare
tale hōguvudanariyā manuja.
Liṅgava biṭṭu an'yaliṅgava pūjemāḍidare
narakavembudanariyā pāpi.
Sākṣi:
“Iṣṭaliṅgē parēt ca bhāvādan'yatra gacchati |
sa kilbiṣamavāpnōti pūjayan niḥphalō bhavēt||''
emba vacanavanariyade mundugāṇadan'yadaivakeraguva
andhakarigendendu bhavahiṅgadendāta nam'ma
paramaguru paḍuviḍi sid'dhamallināthaprabhuve.