Index   ವಚನ - 250    Search  
 
ಲಿಂಗಕ್ಕೆರಗದೆ ಅನ್ಯದೈವಂಗಳಿಗೆರಗುವಾತನ ತಲೆ ಸುಡುಗಾಡಿನಲ್ಲುರುಳುವ ಓಡುವಿಂಗೆ ಸರಿಯೆಂಬೆ. ಲಿಂಗಪೂಜೆಯ ಮಾಡದೆ, ಅನ್ಯದೈವಂಗಳ ಪೂಜೆಯ ಮಾಡುವನ ಕರವ ಹೆಂಡವ ಜಾಲಿಸುವ ಕರವೆಂಬೆ. ಲಿಂಗದ ಪೂಜೆಗಡಿಯಿಡದೆ ಅನ್ಯಲಿಂಗಕೆ ಅಡಿಯಿಡುವನ ಕಾಲು ಇಮ್ಮನದ ಹುಳುವಿಂಗೆ ಸರಿಯೆಂಬೆನು. ಇಂತಪ್ಪ ಲಿಂಗಾಂಗಸಂಗ ಸಮರಸವನರಿಯದೆ ಭ್ರಾಂತಿಭವಿಗಳಂತೆ ಅನ್ಯಲಿಂಗಕ್ಕೆ ಹರಿವ ಜಡದೇಹಿಗಳ ಎಂತು ಶಿವಭಕ್ತಜಂಗಮವೆಂಬೆನಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.