Index   ವಚನ - 251    Search  
 
ಹುಟ್ಟಿದಂದು ತನುವ ಸೋಂಕಿದ ಲಿಂಗವ, ಸಾವಾಗ ಶರೀರದೊಡನೆ ಹೂಳಿಸಿಕೊಂಬ ಲಿಂಗವ ಬಿಟ್ಟು ಬಟ್ಟೆ ಬಟ್ಟೆಯಲ್ಲಿ ಕಂಡ ಕಲ್ಲಿಗೆರಗುವ ಭ್ರಷ್ಟಹೀನ ಹೊಲೆಯರ ನೋಡಾ! ಇಂತಪ್ಪವರ ಶಿವಭಕ್ತರೆನಬಹುದೆ? ಎನಲಾಗದು. ಶಿವಭಕ್ತರಾರೆಂದಡೆ ಹೇಳುವೆ ಕೇಳಿರಣ್ಣಾ; ಗುರುಲಿಂಗಜಂಗಮವೆ ಶಿವನೆಂದು ನಂಬಿಪ್ಪಾತನೆ ಶಿವಭಕ್ತ. ಗುರುವ ನಂಬದೆ, ಲಿಂಗವ ನಂಬದೆ, ಜಂಗಮವ ನಂಬದೆ ಕಿರುಕುಳದೈವಕ್ಕೆ ಹರಕೆಯ ಹೊರುವವ ಭಕ್ತನೂ ಅಲ್ಲ, ಭವಿಯೂ ಅಲ್ಲ. ಇಂತಿವೆರಡರೊಳು ಒಂದೂ ಅಲ್ಲಾದ ಎಡ್ಡಗಳ ನಾನೇನೆಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.