ಗುರುಕರುಣದ ಇಷ್ಟಲಿಂಗವ
ಜರಿದನ್ಯದೈವಕ್ಕೆರಗುವ
ಕುರಿಗಳ ಶಿವಭಕ್ತರೆನಬಹುದೆ?
ಪತಿಯಿರಲು ಪರಪುರುಷಗೆ
ಗತಿಯಾಗಿ ತಿರುಗುವ ಹೊಲತಿಯ
ಮತಿಯಂತೆ ಸಜ್ಜನೆಯೆನಬಹುದೆ?
ಸಿತಕಂಠಲಿಂಗ ಕರದೊಳಿರೆ ಪರ
ಪ್ರತುಮೆಗೆರಗುವ ಹೊಲೆಯನ
ಕ್ಷಿತಿಯೊಳು ಶಿವಭಕ್ತನೆನಬಹುದೆ ? | 1 |
ಮಾರಿ ಮಸಣಿ ಮೈಲಾರನ ಬಳಿ
ನೀರ ಕುಡಿದು ಅವರೆಂಜಲ
ಮಾರಾರಿಲಿಂಗಕ್ಕೆ[ರೆದುಂ]ಬ ಸಮ
ಗಾರನ ಯಮರಾಜ ಬಾಧಿಸಿ
ರೌರವ ನರಕದೊಳಿಕ್ಕುವನಿದ
ಧರಣಿಯೊಳು ತಿಳಿದು ನೋಡಿರೌ. | 2 |
ತಲೆಯೊಳು ಕಿಚ್ಚು ತಳಿಗೆ ಶಸ್ತ್ರ
ಸಲೆ ಬೇವಿನುಡುಗೆ ಬೆನ್ನಲಿ ಸಿಡಿ
ಹಲವು ಹರಕೆಯನು ಪರದೈವ
ಗಳಿಗೆ ಮಾಡುವ ಕ್ಷೀಣ ಅಜ್ಞಾನಿ
ಹೊಲೆಯ ತಾ ಶಿವಭಕ್ತನೆಂದೆನೆ ಮುಂದೆ
ಕುಲಕೋಟಿ ನರಕದೊಳಿಕ್ಕುವ ನೇಮ. | 3 |
ಗುರುಲಿಂಗಜಂಗಮವೆಂಬವು
ಪರಶಿವನ ಚಿದ್ರೂಪವೆಂಬುದ
ನರಿಯದ ಹಲವು ದೈವಗಳಿ
ಗೆರಗಿ ಸೂಳೆಯಂತೆ ತಿರುಗುವ
ನರನ ಲಿಂಗವಂತನೆಂದೆನ್ನೆ ಮುಂದೆ
ಹರ ಶಿಕ್ಷೆಯ ಮಾಡುವ ನನಗೆ. | 4 |
ಶಿವನೆ ದೈವ ಲಿಂಗಾಂಗಿಯೆ ಕುಲಜ
ಭವಿಗಳೆಲ್ಲರು ಅಕುಲಜರೊ
ಬವರ ಧರೆಯೊಳುಸುರಿದೆ
ಹವಿನೇತ್ರ ಪಡುವಿಡಿ ಸಿದ್ಧಮಲ್ಲನೆಂ
ಬುವನ ಸರ್ವಕನೆಂದು ನಂಬಿದ
ಅವ ನಿತ್ಯ ಸತ್ಯ ಸಜ್ಜನನೆಂಬೆ. | 5 |
Art
Manuscript
Music
Courtesy:
Transliteration
Gurukaruṇada iṣṭaliṅgava
jaridan'yadaivakkeraguva
kurigaḷa śivabhaktarenabahude?
Patiyiralu parapuruṣage
gatiyāgi tiruguva holatiya
matiyante sajjaneyenabahude?
Sitakaṇṭhaliṅga karadoḷire para
pratumegeraguva holeyana
kṣitiyoḷu śivabhaktanenabahude? | 1 |
Māri masaṇi mailārana baḷi
nīra kuḍidu avaren̄jala
mārāriliṅgakke[reduṁ]ba sama
gārana yamarāja bādhisi
raurava narakadoḷikkuvanida
dharaṇiyoḷu tiḷidu nōḍirau. | 2 |
Taleyoḷu kiccu taḷige śastra
sale bēvinuḍuge bennali siḍi
halavu harakeyanu paradaiva
gaḷige māḍuva kṣīṇa ajñāni
holeya tā śivabhaktanendene munde
kulakōṭi narakadoḷikkuva nēma. | 3 |
Guruliṅgajaṅgamavembavu
paraśivana cidrūpavembuda
nariyada halavu daivagaḷi
geragi sūḷeyante tiruguva
narana liṅgavantanendenne munde
hara śikṣeya māḍuva nanage. | 4 |
Śivane daiva liṅgāṅgiye kulaja
bhavigaḷellaru akulajaro
bavara dhareyoḷusuride
havinētra paḍuviḍi sid'dhamallaneṁ
buvana sarvakanendu nambida
ava nitya satya sajjananembe. | 5 |