Index   ವಚನ - 260    Search  
 
ಜನನಭಯದ ಮೂಲದ ಬೇರ ಕಿತ್ತು ಸುಟ್ಟುರುಹುವ ಭಸ್ಮ, ಮರಣಭಯದ ಮೂಲದ ದುರಿತ ದುಃಕೃತವನಿಟ್ಟೊರೆಸುವ ಶ್ರೀ ಮಹಾಭಸ್ಮ, ಹಣೆಯೊಳಿಹ ದುರಿತಲಿಖಿತವ ತೊಡೆದು ದೂರಮಾಡುತ್ತಿಪ್ಪ ಭಸ್ಮ, ತ್ರಿಣಯನ ಸಾಲೋಕ್ಯಪದದ ಬಯಕೆಯ ತೋರುವ ಭಸ್ಮ, ಮರ್ತ್ಯಲೋಕದ ಯತಿ ಸಿದ್ಧ ಸಾಧ್ಯರು ಮಹಾಗಣಂಗಳ ಮುಕ್ತರ ಮಾಡುತಿಪ್ಪ ಭಸ್ಮ, ತ್ರಿಣಯನ ಸಾಲೋಕ್ಯದ ದೇವಗಣಂಗಳ ನಿತ್ಯರ ತೋರುವ ಚಿದ್ಭಸ್ಮ , ಚಿದಾನಂದ ಭಸ್ಮ, ಇದು ಶುದ್ಧ ಪರಶಿವನ ಚಿದ್ರೂಪವೆಂದು ಮುದದೆ ಧರಿಸಿ, ಭವಸಾಗರವ ದಾಂಟಿ ನಿತ್ಯನಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.