ಭಸಿತದ ಮೇಲೆ ಅನ್ಯದೇವರ ಬಂಡಾರವನಿಡುವ
ಅನಾಮಿಕ ಹೊಲೆಯನ ಶಿವಭಕ್ತನೆಂದು ಕರೆಯಬಹುದೆ?
ಕರೆಯಬಾರದು.
ಕರೆದವರಿಗೆ ಮಹಾದೋಷ.
ತೊತ್ತಿನಮೇಲೆ ಗರತಿಯಲ್ಲದೆ, ಗರತಿಯ ಮೇಲೆ ತೊತ್ತೆ?
ಮಿಥ್ಯದೈವದ ಗಂಟಲಗಾಣವೆಂಬ ಶ್ರೀ ವಿಭೂತಿಯ ಧರಿಸಿ,
ಶಿವಪದ ಸಾಧಿಸಲರಿಯದೆ ಮಣ್ಣು ಪಟ್ಟಿಯ ಧರಿಸಿ ಕೆಡುವ
ಕುನ್ನಿಗಳ ನಾನೇನೆಂಬೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Bhasitada mēle an'yadēvara baṇḍāravaniḍuva
anāmika holeyana śivabhaktanendu kareyabahude?
Kareyabāradu.
Karedavarige mahādōṣa.
Tottinamēle garatiyallade, garatiya mēle totte?
Mithyadaivada gaṇṭalagāṇavemba śrī vibhūtiya dharisi,
śivapada sādhisalariyade maṇṇu paṭṭiya dharisi keḍuva
kunnigaḷa nānēnembenayyā
paramaguru paḍuviḍi sid'dhamallināthaprabhuve.