ಹರ ತ್ರಿಪುರದಹನದಲ್ಲಿ [ಈಕ್ಷಿಸಿ] ನೋಡಲಾಕ್ಷಣ
ನಯನಜಲದೊರೆದು ಉದಯವಾದ ಶ್ರೀರುದ್ರಾಕ್ಷಿ.
ಪರಮ ಮುನಿಗಳಿಗೆ ಮೋಕ್ಷಾರ್ಥವನೀವ ಶ್ರೀರುದ್ರಾಕ್ಷಿ.
ಧರೆಯ ಸದ್ಭಕ್ತರುಗಳ ಪಾಲನಮಾಡಿ ತೋರುವ ಶ್ರೀರುದ್ರಾಕ್ಷಿ,
ಕರ್ಮಶರಧಿಯ ನಿಟ್ಟೊರಸುವುದಕ್ಕೆ ಶ್ರೀರುದ್ರಾಕ್ಷಿ.
ದರುಶನವ ಮಾಡಿದರೆ ಲಕ್ಷಪುಣ್ಯ,
ಸ್ಪರುಶನವ ಮಾಡಿದರೆ ಕೋಟಿಫಲಂ,
ಧರಿಸಿದಡಂ ದಶಶತಕೋಟಿ ಫಲಂ
ಇನಿತು ಫಲವಪ್ಪುದು ಶ್ರೀ ರುದ್ರಾಕ್ಷಿಯಿಂ.
ಸಾಕ್ಷಿ:
“ಲಕ್ಷಂ ತದ್ದರ್ಶನಾತ್ಪುಣ್ಯಂ ಕೋಟಿಃ ಸಂಸ್ಪರ್ಶನಾದಪಿ |
ದಶಕೋಟಿ ಶತಂ ಪುಣ್ಯಂ ಧಾರಣಾತ್ ಲಭತೇ ನರಃ ||''
ಹೀಗೆನಿಸುವ ರುದ್ರಾಕ್ಷಿಯ ಧರಿಸಿ,
ರುದ್ರಪದವಿಯನೈದುವುದು ತಪ್ಪದು ನೋಡಾ!
ಅದು ಹೇಗೆಂದರೆ: ಆವನೊಬ್ಬನು ಕೊರಳಲ್ಲಿ ರುದ್ರಾಕ್ಷಿಯ ಧರಿಸೆ
ಅವನ ಕುಲಕೋಟಿ ಸಹವಾಗಿ ಶಿವಲೋಕವನೈದರೆ?
ಅದಕೆ ಶ್ರುತಿ ದೃಷ್ಟವುಂಟೇಯೆಂದರೆ ಉಂಟು.
ಸಾಕ್ಷಿ:
“ರುದ್ರಾಕ್ಷಾಶ್ರಿತಕಂಠಶ್ಚ ಗೃಹೇ ತಿಷ್ಠತಿ ಯೋ ನರಃ |
ಕುಲೈಕಂ ವಿಂಶಯುಕ್ತಂ ಚ ಶಿವಲೋಕೇ ಮಹೀಯತೇ ||''
ಎಂದೆನಿಸುವ ರುದ್ರಾಕ್ಷಿಯ ಮೂಲ ಬ್ರಹ್ಮನೆಂದಿತ್ತು ಪೌರಾಣ.
ರುದ್ರಾಕ್ಷಿಯ ಗಳ ವಿಷ್ಣುವೆಂದಿತ್ತು ಪೌರಾಣ.
ರುದ್ರಾಕ್ಷಿಯ ಮುಖ ಸದಾಶಿವನೆಂದಿತ್ತು ಪೌರಾಣ.
ರುದ್ರಾಕ್ಷಿಯ ಸರ್ವಾಂಗವೆಲ್ಲ ಸರ್ವದೇವರೆಂದಿತ್ತು ಪೌರಾಣ.
ಸಾಕ್ಷಿ:
“ರುದ್ರಾಕ್ಷಿಮೂಲಂ ಬ್ರಹ್ಮಾ ಚ ತನ್ನಾಳಂ ವಿಷ್ಣುರುಚ್ಯತೇ |
ಮುಖಂ ಸದಾಶಿವಂ ಪ್ರೋಕ್ತಂ ಬಿಂದುಃ ಸರ್ವತ್ರ ದೇವತಾ ||''
ಎಂದೆನಿಸುವ ರುದ್ರಾಕ್ಷಿಯ ಧರಿಸಿ ರುದ್ರನಾಗಿದ್ದೆನು.
`ಅತಏವ ರುದ್ರಾಕ್ಷಿಧಾರಣಂ ರುದ್ರಾ'ಯೆಂದಿತ್ತು ವೇದ.
ರುದ್ರಾಕ್ಷಿಯ ಧರಿಸಿ ಶುದ್ಧಚಿದ್ರೂಪನಾಗಿದ್ದೆನು ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Hara tripuradahanadalli [īkṣisi] nōḍalākṣaṇa
nayanajaladoredu udayavāda śrīrudrākṣi.
Parama munigaḷige mōkṣārthavanīva śrīrudrākṣi.
Dhareya sadbhaktarugaḷa pālanamāḍi tōruva śrīrudrākṣi,
karmaśaradhiya niṭṭorasuvudakke śrīrudrākṣi.
Daruśanava māḍidare lakṣapuṇya,
sparuśanava māḍidare kōṭiphalaṁ,
dharisidaḍaṁ daśaśatakōṭi phalaṁ
initu phalavappudu śrī rudrākṣiyiṁ.
Sākṣi:
“Lakṣaṁ taddarśanātpuṇyaṁ kōṭiḥ sansparśanādapi |
daśakōṭi śataṁ puṇyaṁ dhāraṇāt labhatē naraḥ ||''
hīgenisuva rudrākṣiya dharisi,
Rudrapadaviyanaiduvudu tappadu nōḍā!
Adu hēgendare: Āvanobbanu koraḷalli rudrākṣiya dharise
avana kulakōṭi sahavāgi śivalōkavanaidare?
Adake śruti dr̥ṣṭavuṇṭēyendare uṇṭu.
Sākṣi:
“Rudrākṣāśritakaṇṭhaśca gr̥hē tiṣṭhati yō naraḥ |
kulaikaṁ vinśayuktaṁ ca śivalōkē mahīyatē ||''
endenisuva rudrākṣiya mūla brahmanendittu paurāṇa.
Rudrākṣiya gaḷa viṣṇuvendittu paurāṇa.
Rudrākṣiya mukha sadāśivanendittu paurāṇa.
Rudrākṣiya sarvāṅgavella sarvadēvarendittu paurāṇa.
Sākṣi:
“Rudrākṣimūlaṁ brahmā ca tannāḷaṁ viṣṇurucyatē |
mukhaṁ sadāśivaṁ prōktaṁ binduḥ sarvatra dēvatā ||''
endenisuva rudrākṣiya dharisi rudranāgiddenu.
`Ata'ēva rudrākṣidhāraṇaṁ rudrā'yendittu vēda.
Rudrākṣiya dharisi śud'dhacidrūpanāgiddenu kāṇā
paramaguru paḍuviḍi sid'dhamallināthaprabhuve.