Index   ವಚನ - 273    Search  
 
ಶಿರದೊಳು ಧರಿಸಲು ಕೋಟಿ ಫಲ ಕರ್ಣದೊಳು ಧರಿಸಲು ದಶಕೋಟಿ ಫಲ ಕೊರಳೊಳು ಧರಿಸಲು ಶತಕೋಟಿ ಫಲ. ಬಾಹುವಿನೊಳು ಧರಿಸಲು ಸಾವಿರ ಫಲವೆಂದಿಹುದು ದೃಷ್ಟ. ಸಾಕ್ಷಿ: “ಶಿರಸಾ ಧಾರಣಾತ್ಕೋಟಿ ಕರ್ಣಯೋರ್ದಶಕೋಟಿ ಚ | ಶತಂ ಕೋಟಿ ಗಳೇ ಬದ್ಧಂ ಸಾಹಸ್ರಂ ಬಾಹುಧಾರಣಾತ್ ||'' ಎಂದುದಾಗಿ, ಹಸ್ತ ಬಾಹು ಉರ ಕಂಠ ಕರ್ಣ ಮಸ್ತಕದಲ್ಲಿ ಶ್ರೀ ರುದ್ರಾಕ್ಷಿಯ ಧರಿಸಿ ನಿತ್ಯ ಮುಕ್ತನಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.