ಶಿಲೆ ಮೌಕ್ತಿಕ ಪದ್ಮಾಕ್ಷಿ ಸುವರ್ಣ ಸಲೆ ಪುತ್ರಂಜಿ ಮೊದಲಾದ
ಇಂತಿವರಲ್ಲಿ ಜಪವ ಮಾಡಿದರೆ ಒಂದೊಂದಕೊಂದು ಫಲವಿಹುದು.
ಶ್ರೀ ರುದ್ರಾಕ್ಷಿಯ ಧರಿಸಲು ಅನಂತಫಲವೆಂದಿತ್ತು ಪೌರಾಣ.
ಸಾಕ್ಷಿ:
“ಅಂಗುಲೀ ಜಪಸಂಖ್ಯಾಭಿರೇಕೈಕಾಂತು ವರಾನನೇ |
ರೇಖಾಯಷ್ಟಗುಣಂ ಪ್ರೋಕ್ತಂ ಪುತ್ರಜೀವಿಪಲೈರ್ದಶ ||”
ಎಂದುದಾಗಿ,
“ಶಂಖೆಶ್ಶತಗುಣವಿಂದ್ಯಾತ್ಪ್ರವಾಳಸ್ತು ಸಹಸ್ರಕಂ |
ಸ್ಫಟಿಕೈರ್ದಶಸಾಹಸ್ರಂ ಮೌಕ್ತಕಂ ಲಕ್ಷಮೇವ ಚ ||”
ಎಂದುದಾಗಿ,
“ಪದ್ಯಾಕ್ಷಿರ್ದಶಲಕ್ಷಂತು ಸುವರ್ಣಕೋಟಿರುಚ್ಯತೇ |
ದಶಕೋಟಿ ಕುಶದ್ರಾಂತೆ ರುದ್ರಾಕ್ಷಿಯನಂತ ಫಲ ||” (?)
ಎಂದೆನಿಸುವ ರುದ್ರಾಕ್ಷಿಯ ಧರಿಸಿ ರುದ್ರನಾಗಿದ್ದೆನು ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Śile mauktika padmākṣi suvarṇa sale putran̄ji modalāda
intivaralli japava māḍidare ondondakondu phalavihudu.
Śrī rudrākṣiya dharisalu anantaphalavendittu paurāṇa.
Sākṣi:
“Aṅgulī japasaṅkhyābhirēkaikāntu varānanē |
rēkhāyaṣṭaguṇaṁ prōktaṁ putrajīvipalairdaśa ||”
endudāgi,
“śaṅkheśśataguṇavindyātpravāḷastu sahasrakaṁ |
sphaṭikairdaśasāhasraṁ mauktakaṁ lakṣamēva ca ||”
Endudāgi,
“padyākṣirdaśalakṣantu suvarṇakōṭirucyatē |
daśakōṭi kuśadrānte rudrākṣiyananta phala ||” (?)
Endenisuva rudrākṣiya dharisi rudranāgiddenu kāṇā
paramaguru paḍuviḍi sid'dhamallināthaprabhuve.