ವಚನ - 1216     
 
ತನುವ ಗೆಲಲರಿಯದೆ, ಮನವ ಗೆಲಲರಿಯದೆ ಧನವ ಗೆಲಲರಿಯದೆ, ಭ್ರಮೆಗೊಂಡಿತ್ತು ಲೋಕವೆಲ್ಲವು. ತನುವ ದಾಸೋಹಕ್ಕೆ ಸವೆಸಿ, ಮನವ ಲಿಂಗಧ್ಯಾನದಲ್ಲಿ ಸವೆಸಿ, ಧನವ ಜಂಗಮದಲ್ಲಿ ಸವೆಸಿ ಗೆಲಬಲ್ಲಡೆ, ಸಂಗನಬಸವಣ್ಣನಲ್ಲದೆ ಮತ್ತಾರನು ಕಾಣೆ. ಗುಹೇಶ್ವರಾ-ನಿಮ್ಮ ಶರಣ ಸಂಗನಬಸವಣ್ಣಂಗೆ, ನಮೋ ನಮೋ ಎನುತಿರ್ದೆನು.

C-375 

  Fri 13 Oct 2023  

 ತುಂಬಾ ಅದ್ಭುತವಾದ ವಚನ. ಇದನ್ನು ಅರಿತು ನಡೆದರೆ ಅಂತರಂಗ, ಬಹಿರಂಗ ಸುಂದರ. ಜಗವೆಲ್ಲ ಸುಂದರ ವಾಗುತ್ತದೆ.
  ಜಿ ಕೆ ನಾಗರಾಜ್