ಗುದದಲ್ಲಿ ಆಧಾರಚಕ್ರ, ಪೃಥ್ವಿಯೆಂಬ ಮಹಾಭೂತ,
ಚತುಃಷ್ಕೋಣ, ಚೌದಳಪದ್ಮ, ಅಲ್ಲಿಯ ಅಕ್ಷರ ವಶಷಸವೆಂಬ
ನಾಲ್ಕು ಅಕ್ಷರ, ಅದರ ವರ್ಣ[ಪೀತ], ಅದಕ್ಕೆ ಅಧಿದೇವತೆ[ಬ್ರಹ್ಮ],
ಭಕ್ತ ಮುಖ, ಕ್ರಿಯಾಶಕ್ತಿ, ಆಚಾರಲಿಂಗ, ನಕಾರ ಸ್ವಾಯತ.
ಲಿಂಗಸ್ಥಾನದಲ್ಲಿ ಸ್ವಾಧಿಷ್ಠಾನಚಕ್ರ, ಅಪ್ಪುವೆಂಬ ಮಹಾಭೂತ, ಧನುರ್ಗತಿ,
ಷಡುದಳಪದ್ಮ, ಅಲ್ಲಿಯ ಅಕ್ಷರವಾರು ಬ ಭ ಮ ಯ ರ ಲ;
ಅದರ ವರ್ಣ [ಶ್ವೇತ], ಅಧಿದೇವತೆ [ವಿಷ್ಣು], ಮಹೇಶ ಮುಖ,
ಜ್ಞಾನಶಕ್ತಿ, ಗುರುಲಿಂಗ, ಅಲ್ಲಿ ಮಕಾರ ಸ್ವಾಯತ.
ನಾಭಿಸ್ಥಾನದಲ್ಲಿ ಮಣಿಪೂರಕಚಕ್ರ, ತೇಜವೆಂಬ ಮಹಾಭೂತ,
ತ್ರಿಕೋಣ, ದಶದಳಪದ್ಮ, ಅಲ್ಲಿಯ ಅಕ್ಷರ ಹತ್ತು;
ಡಢಣ ತಥದಧನ ಪಫ, ಅದಕ್ಕೆ [ಹರಿತ]ವರ್ಣ,
ಅಧಿದೇವತೆ [ರುದ್ರ], ಪ್ರಸಾದಿ ಮುಖ, ಇಚ್ಚಾಶಕ್ತಿ,
ಶಿವಲಿಂಗ, ಶಿಕಾರ ಸ್ವಾಯತ.
ಹೃದಯಸ್ಥಾನದಲ್ಲಿ ಅನಾಹತಚಕ್ರ, ವಾಯುವೆಂಬ ಮಹಾಭೂತ,
ಷಟ್ಕೋಣ, ದ್ವಿದಶದಳಪದ್ಮ, ಅಲ್ಲಿಯ ಅಕ್ಷರ ಹನ್ನೆರಡು:
ಕ ಖ ಗ ಘ ಙ ಚ ಛ ಜ ಝ ಞ ಟ ಠ ಅದರ ವರ್ಣ
[ಮಾಂಜಿಷ್ಟ], ಅದಕ್ಕೆ ಅಧಿದೇವತೆ [ಈಶ್ವರ],
ಪ್ರಾಣಲಿಂಗಿ ಮುಖ, [ಆದಿ]ಶಕ್ತಿ, ಜಂಗಮಲಿಂಗ,
ಅಲ್ಲಿ ವಕಾರ ಸ್ವಾಯತ.
ಕಂಠಸ್ಥಾನದಲ್ಲಿ ವಿಶುದ್ಧಿಚಕ್ರ, ಆಕಾಶವೆಂಬ ಮಹಾಭೂತ,
ವರ್ತುಳಾಕಾರ, ಷೋಡಷದಳಪದ್ಮ, ಅಲ್ಲಿಯ ಅಕ್ಷರ
ಹದಿನಾರು: ಅ ಆ ಇ ಈ ಉ ಊ ಋ ೠ ಲೃ ಲೄ ಏ ಐ
ಓ ಔ ಅಂ ಅಃ, ಅದಕ್ಕೆ ವರ್ಣ [ಕಪೋತ],
ಅಧಿದೇವತೆ ಸದಾಶಿವನು, ಶರಣ ಮುಖ, [ಪರಾ]ಶಕ್ತಿ,
[ಪ್ರಸಾದಲಿಂಗ, ಯಕಾರ ಸ್ವಾಯತ.
ಭ್ರೂಮಧ್ಯದಲ್ಲಿ ಆಜ್ಞಾಚಕ್ರ, ಮನವೆಂಬ ಮಹಾಭೂತ, ದ್ವಿದಳಪದ್ಮ,]
ಅಲ್ಲಿಯ ಅಕ್ಷರವೆರಡು: ಹಂ ಕ್ಷಂ ವೆಂಬ [ಅಕ್ಷರ],
ಮಾಣಿಕ್ಯ ವರ್ಣ, [ಅದಕ್ಕೆ ಅಧಿದೇವತೆ ಮಹೇಶ್ವರ],
ಐಕ್ಯ ಮುಖ, ಕ್ರಿಯಾಶಕ್ತಿ, ಮಹಾಲಿಂಗ, ಓಂಕಾರ ಸ್ವಾಯತ.
ಇಂತೀ ಷಡುಚಕ್ರದ, ಷಡುಸ್ಥಳದ, ಷಡುಲಿಂಗದ,
ಷಡುಶಕ್ತಿಯರಿಗೆ ಷಡಕ್ಷರವೆ ಪ್ರಾಣವಾಗಿ ವಿರಾಜಿಸುತ್ತಿದ್ದಿತಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Gudadalli ādhāracakra, pr̥thviyemba mahābhūta,
catuḥṣkōṇa, caudaḷapadma, alliya akṣara vaśaṣasavemba
nālku akṣara, adara varṇa[pīta], adakke adhidēvate[brahma],
bhakta mukha, kriyāśakti, ācāraliṅga, nakāra svāyata.
Liṅgasthānadalli svādhiṣṭhānacakra, appuvemba mahābhūta, dhanurgati,
ṣaḍudaḷapadma, alliya akṣaravāru ba bha ma ya ra la;
adara varṇa [śvēta], adhidēvate [viṣṇu], mahēśa mukha,
jñānaśakti, guruliṅga, alli makāra svāyata.
Nābhisthānadalli maṇipūrakacakra, tējavemba mahābhūta,
trikōṇa, daśadaḷapadma, alliya akṣara hattu;
ḍaḍhaṇa tathadadhana papha, adakke [harita]varṇa,Adhidēvate [rudra], prasādi mukha, iccāśakti,
śivaliṅga, śikāra svāyata.
Hr̥dayasthānadalli anāhatacakra, vāyuvemba mahābhūta,
ṣaṭkōṇa, dvidaśadaḷapadma, alliya akṣara hanneraḍu:
Ka kha ga gha ṅa ca cha ja jha ña ṭa ṭha adara varṇa
[mān̄jiṣṭa], adakke adhidēvate [īśvara],
prāṇaliṅgi mukha, [ādi]śakti, jaṅgamaliṅga,
alli vakāra svāyata.
Kaṇṭhasthānadalli viśud'dhicakra, ākāśavemba mahābhūta,
vartuḷākāra, ṣōḍaṣadaḷapadma, alliya akṣara
hadināru: A ā i ī u ū r̥ r̥̄ lr̥ lr̥̄ ē ai
ō au aṁ aḥ, adakke varṇa [kapōta],
adhidēvate sadāśivanu, śaraṇa mukha, [parā]śakti,
[Prasādaliṅga, yakāra svāyata.
Bhrūmadhyadalli ājñācakra, manavemba mahābhūta, dvidaḷapadma,]
alliya akṣaraveraḍu: Haṁ kṣaṁ vemba [akṣara],
māṇikya varṇa, [adakke adhidēvate mahēśvara],
aikya mukha, kriyāśakti, mahāliṅga, ōṅkāra svāyata.
Intī ṣaḍucakrada, ṣaḍusthaḷada, ṣaḍuliṅgada,
ṣaḍuśaktiyarige ṣaḍakṣarave prāṇavāgi virājisuttidditayya
paramaguru paḍuviḍi sid'dhamallināthaprabhuve.