ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ
ಭಕ್ತಿಸ್ಥಲವೆಂತು ಅಳವಡುವುದಯ್ಯಾ!
ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ
ಮಹೇಶ್ವರಸ್ಥಲವೆಂತು ಅಳವಡುವುದಯ್ಯಾ!
ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ
ಪ್ರಸಾದಿಸ್ಥಲವೆಂತು ಅಳವಡುವುದಯ್ಯಾ!
ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ
ಪ್ರಾಣಲಿಂಗಿಸ್ಥಲವೆಂತು ಅಳವಡುವುದಯ್ಯಾ!
ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ
ಶರಣಸ್ಥಲವೆಂತು ಅಳವಡುವುದಯ್ಯಾ!
ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ
ಐಕ್ಯಸ್ಥಲವೆಂತು ಅಳವಡುವುದಯ್ಯಾ!
ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯಸ್ಥಲವೆಂಬ
ಷಡುಸ್ಥಲಕ್ಕೆ ಅಷ್ಟಾವರಣವೆ ಮುಖ್ಯ ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Aṣṭāvaraṇadalli naiṣṭhevāriyāgadannakkara
bhaktisthalaventu aḷavaḍuvudayyā!
Aṣṭāvaraṇadalli naiṣṭhevāriyāgadannakkara
mahēśvarasthalaventu aḷavaḍuvudayyā!
Aṣṭāvaraṇadalli naiṣṭhevāriyāgadannakkara
prasādisthalaventu aḷavaḍuvudayyā!
Aṣṭāvaraṇadalli naiṣṭhevāriyāgadannakkara
prāṇaliṅgisthalaventu aḷavaḍuvudayyā!
Aṣṭāvaraṇadalli naiṣṭhevāriyāgadannakkara
śaraṇasthalaventu aḷavaḍuvudayyā!
Aṣṭāvaraṇadalli naiṣṭhevāriyāgadannakkara
Aikyasthalaventu aḷavaḍuvudayyā!
Bhakta mahēśvara prasādi prāṇaliṅgi śaraṇa aikyasthalavemba
ṣaḍusthalakke aṣṭāvaraṇave mukhya kāṇā
paramaguru paḍuviḍi sid'dhamallināthaprabhuve.
ಸ್ಥಲ -
ಅಷ್ಟಾವರಣ ಮಹಾತ್ಮೆಯಸ್ಥಲ