Index   ವಚನ - 288    Search  
 
ಗುರುವಾದಾತನು ಪರಶಿವ ತಾನೆ ನೋಡಾ! ಲಿಂಗವಾದಾತನು ಪರಶಿವ ತಾನೆ ನೋಡಾ! ಜಂಗಮವಾದಾತನು ಪರಶಿವ ತಾನೆ ನೋಡಾ! ವಿಭೂತಿಯಾದಾತನು ಪರಶಿವ ತಾನೆ ನೋಡಾ! ರುದ್ರಾಕ್ಷಿಯಾದಾತನು ಪರಶಿವ ತಾನೆ ನೋಡಾ! ಪಾದೋದಕವಾದಾತನು ಪರಶಿವ ತಾನೆ ನೋಡಾ! ಪ್ರಸಾದವಾದಾತನು ಪರಶಿವ ತಾನೆ ನೋಡಾ! ಪಂಚಾಕ್ಷರಿಯಾದಾತನು ಪರಶಿವ ತಾನೆ ನೋಡಾ! ಇಂತು ಅಷ್ಟಾವರಣಮುಖದಲ್ಲಿ ನಿಂತು ಅಂತಕನ ಪಾಶವ ಸುಟ್ಟುರುಹಿದೆಯಲ್ಲ ಉರಗಧರ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.