ಶಿವಲಿಖಿತಕ್ಕೆ ಸಿಕ್ಕು-ವಕ್ರಗಳುಂಟೇನಯ್ಯ?
ಭವಭವದಲ್ಲಿ ಬಂದರು ಬ್ರಹ್ಮ ವಿಷ್ಣು ರುದ್ರರು,
ಮಾರ್ಕಂಡೇಯಗೆ ಮರಣ ತಪ್ಪುವುದೆ?
ರವಿ ಚಂದ್ರರ್ಕಗಳಿಗೆ ರಾಹು ಕೇತು ಅಡರದೆ ಬಿಡುವುದೆ?
ಭುವನದ ಹೆಪ್ಪುವೊಡದು ಭೂತಳವೊಂದಾಗದೆ?
ದಿವಾರಾತ್ರಿಯೇಕ ದೀಪ್ತಿ;
ಏಕೋವರ್ಣ ಶಾಂತಕ್ಕೆ ಪವಿತ್ರ ಅಪವಿತ್ರ
ಲೋಕಕ್ಕೆ ಭಿನ್ನ ಕಾಣೈ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.