Index   ವಚನ - 5    Search  
 
ತತ್ವಭಕ್ತಿ, ತತ್ವಮುಕ್ತಿ, ತತ್ವ ಉತ್ಪತ್ಯದ ತನು ಸಾರಾಯ ತತ್ವವೃಕ್ಷದಿಂದ ಪುಟ್ಟಿದವು. ಎಂಬತ್ತು ನಾಲ್ಕು ಲಕ್ಷ ಸಂಕಲ್ಪವೆಲ್ಲ ತತ್ವಾದಿಗಳು. ಯಾತಕ್ಕೆ ಭೇದವ ಮಾಳ್ಪಿರಯ್ಯಾ? ಪೃಥ್ವಿ ಪೃಥ್ವಿಯ ಕೂಡಿತು ಅಪ್ಪು ಅಪ್ಪುವ ಕೂಡಿತು ವಾಯು ವಾಯುವ ಕೂಡಿತು ಆಕಾಶ ಆಕಾಶದೊಳು ಸಹಕಾರ್ಯವಾಯಿತು. ಆ ಭಕ್ತನ ವಿಭೇದವಿಲ್ಲದ ಕಾರಣದಿಂದ ಶರೀರ ಭಿನ್ನವಾಗದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.