Index   ವಚನ - 9    Search  
 
ಗುರುಲಿಂಗ ಜಂಗಮವೆಂಬರಲ್ಲದೆ ಅರಿವುದಕ್ಕೆ ಒಬ್ಬರೂ ಇಲ್ಲವಯ್ಯ. ಕರುವ ಕಟ್ಟಿ ಎರದಲ್ಲದೆ ಕಂಚಿನ ಸ್ವರೂಪು ಅಪ್ಪುದೆ? ಸ್ಥಿರಚಿತ್ತದಿಂದ ಜೀವನೆ ಪರಮ, ಪರಮನೆ ಜೀವನೆಂದು ಅರಿವುದು. ಪರಿಪೂರ್ಣವಪ್ಪುದೇ ವಿರಹಿತ ಲೋಕಕ್ಕೆ? ಅದಲ್ಲದೆ ಏಕವಾಕ್ಯನು ಅಲ್ಲ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಪ್ರಾಣಲಿಂಗ ಸಂಗ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.