ದಾನಧರ್ಮ ಪರೋಪಕಾರವೆಂಬ[ವ]
ಹೀನ ಮರುಳರು ಎತ್ತ ಬಲ್ಲರಯ್ಯ?
ದೀನನಾರು? ದಾನದಾರು?
ಮಾನಿತ ಜ್ಞಾತ ಕೈಯಪರ ಉಪಕಾರ
ಬಾನದ ಕುರುಳೊಳು ಚೇಳಹಾಕಿ ಮಡಗುವರೆ?
ಜ್ಞಾನದ ವಾಕ್ಯವಲ್ಲವು.
ನಾನು ನೀನುಯೆಂಬ ಧೇನುಕರ ಮಾತಿಗೆ
ಮೇಘಸುರಿಯುತಿದೆ ಬೆಳೆ ಬೆಳೆಯುತಿದೆ
ನಾ ನೀಡಿದೆ ನಾ ಮಾಡಿದೆ, ನಾ ಬೇಡಿದೆನೆಂಬ ಜನ್ಮಕೆ
ನರಕ ತಪ್ಪದು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Dānadharma parōpakāravemba[va]
hīna maruḷaru etta ballarayya?
Dīnanāru? Dānadāru?
Mānita jñāta kaiyapara upakāra
bānada kuruḷoḷu cēḷahāki maḍaguvare?
Jñānada vākyavallavu.
Nānu nīnuyemba dhēnukara mātige
mēghasuriyutide beḷe beḷeyutide
nā nīḍide nā māḍide, nā bēḍidenemba janmake
naraka tappadu kāṇā
ele nam'ma kūḍalacennasaṅgamadēvayya.