ವ್ರತ ಸ್ವವ್ರತಸ್ಥರೆಲ್ಲ ಗತಿಯಿಂ
ಕೋಳಾದ ವ್ರತಗೇಡಿಯಾದರಯ್ಯ.
ವ್ರತಿಗೆ ಪ್ರತಿ ಗುರುವೆನಬಹುದೆ?
ವ್ರತಿಗೆ ಪ್ರತಿ ಲಿಂಗವೆನಬಹುದೆ?
ವ್ರತಿಗೆ ಪ್ರತಿ ಜಂಗಮವೆನಬಹುದೆ?
ಅದು ಕಾರಣದಿಂದ ಮತ ತಪ್ಪಿಹೋದರು
ಸರಿಕರೆಂಬುತ ಮತಿ ಪ್ರಕಾಶವಡಗಿತು
ಮನದೊಳು ಸಂಚಲ ಪುಟ್ಟಿತು.
ಕೃತಯುಗ ಹೇಮ, ತ್ರೇತಾಯುಗ ಬೆಳ್ಳಿ,
ದ್ವಾಪರ ತಾಮ್ರ, ಕಲಿಯುಗಕೆ ಕಲ್ಲಾಯಿತು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
Art
Manuscript
Music Courtesy:
Video
TransliterationVrata svavratastharella gatiyiṁ
kōḷāda vratagēḍiyādarayya.
Vratige prati guruvenabahude?
Vratige prati liṅgavenabahude?
Vratige prati jaṅgamavenabahude?
Adu kāraṇadinda mata tappihōdaru
sarikarembuta mati prakāśavaḍagitu
manadoḷu san̄cala puṭṭitu.
Kr̥tayuga hēma, trētāyuga beḷḷi,
dvāpara tāmra, kaliyugake kallāyitu kāṇā
ele nam'ma kūḍalacennasaṅgamadēvayya.