Index   ವಚನ - 38    Search  
 
ನೆಳಲಾನು ಆಪೆನುಯೆಂಬ ಅರೆಮರುಳು ಭ್ರಾಂತನೆ ಕೇಳೈ. ತಿಳಿ ನಿನ್ನೊಳು ನೀನು ತ್ರಿಪುರದ ಮಾರ್ಗವನು. ಸುಳುಹಿನೊಳು ಸೂಕ್ಷ್ಮ ಸುಖದುಃಖಗಳು. ಬೆಳಬೆಳದುಯಿದೆ ಭೇದಾಭೇದವು ಮೊಳೆಯಂಚಿವು ಭೇದಕಾರಣದಿಂ ಹೆಮ್ಮರನಾಯಿತು ಕಾಣಾ. ಒಳಗಿದ್ದರೆ ಹೊರಗೆಯಿತ್ತು. ಹೊರಗಿದ್ದರೆ ಒಳಗೆಯಿತ್ತು ನೆಳಲ ನುಂಗಿ ತಾನೆ ತಾನಾಯಿತು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.