Index   ವಚನ - 43    Search  
 
ಶಾಸ್ತ್ರವೆಲ್ಲ ಸಂತೆಯ ಸಂಗಡ; ಪುರಾಣವೆಲ್ಲ ಪುಂಡರ ಸಂಗಡ; ನೇತ್ರ ಸೂತ್ರದಲಿ ಗ್ರಹಿಸಿಪ್ಪುದೆಲ್ಲ ಸುದ್ಧ ಅಬದ್ಧವು. ಕಾತುರ ಕಡು ಮೂರ್ಖತ್ವವು ಭ್ರಾಂತು ಚಿಷ್ಟ ಉಚ್ಛಿಷ್ಟವು ಭೂತಪ್ರಾಣಿಗೆ ಯಾತಕಯ್ಯ ಭೂಸ್ವರ್ಗಂಗಳು ಆತ್ಮ ಶುಚಿರ್ಭೂತನಾದರೆ ಅಪರಿಮಿತ ಅಸಾಧ್ಯ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.