Index   ವಚನ - 50    Search  
 
ನಾನುಯೆಂಬ ಅಕ್ಷರದ ಮೊದಲ ಏನೆಂದು ಬಲ್ಲರಯ್ಯ? ಕಾನನದೊಳು ಪುಳುವಿರಲು ಜಲಮಲ ಪುಳುವಿಗೆ ಮರಣ. ಜೇನುಯೆಂಬುದು ಹುಟ್ಟು ಹೊಂದಿನ ಜೀವನ ಅವಸ್ಥೆಯ ನಾನಾ ವಿಧ ಮಧು ಬಂದು ಉದಯವು. ಪುಟ್ಟುವೇ ಓಂ ನಮೋ ಎಂಬ ಮೂರಕ್ಷರ ಜ್ಞಾನಿಗೆ ತಿಳಿವುಂಟು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.