Index   ವಚನ - 61    Search  
 
ನಾನು ನೀನುಯೆಂಬ ಸಂದೇಹ ನಕಾರದೊಳು ಪುಟ್ಟಿತಯ್ಯ. ಜ್ಞಾನ ಅಜ್ಞಾನವೆಂಬುದು ಎರಡು ಕೊನೆ ಬುಡ ನಂಬಿಗೆ ಅಪನಂಬಿಗೆ ಧ್ಯಾನಾರೂಢದಲಿ ಅಜ್ಞಾನವೆಂಬ ಅಂಕುರವ ಚಿವುಟಬಲ್ಲರೆ? ಮಾನ್ಯಗೆ ಅಂಧ ಕಾವಳ ಹರಿ[ಹರಿ]ದು ಅಹಂಕಾರವಳಿವುದು ಮನ ಅನುಮನವೆಂಬ ಮರೆ ತೆರೆ ಮಾಯಪಾಶ ಹರಿ[ವುದು] ಬೇನೆ ಬಂದರೆ ಶರೀರಕ್ಕೆ ಲಘುವಾದಂತೆಯಾಯಿತ್ತು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.