Index   ವಚನ - 72    Search  
 
ಜ್ಞಾನಸ್ವರೂಪು ಮಾನವಸ್ವರೂಪಿನೊಳು ಅಡಿಗಿದ್ದ ಪರಿಯೆಂತು ಹೇಳಾ? ಮಾನೀಶಂಗೆ ಮಾಯವಿಲ್ಲದಿರೆ ಮತ್ತೆ ಉತ್ಪತ್ತಿ ಸ್ಥಿತಿಲಯವಿಲ್ಲ. ಜ್ಞಾನಕ್ಕೆ ಅಜ್ಞಾನವಾದಿ, ಮನಕ್ಕೆ ನಿರ್ಮನವೆ ಆದಿ. ಸ್ವಾನುಭಾವ ಕ್ಷಣ ಚಿತ್ತ ಕ್ಷಣದುಶ್ಚಿತ್ತ ಇನಿತು ಅಂತಸ್ತ ಮಾನೀಶಂಗೆ ಒಂದೆ ಬುಡ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.