Index   ವಚನ - 74    Search  
 
ಕರ್ಮದಿಂದ ಧರ್ಮ, ಕ್ರಿಯದಿಂದ ನಿಃಕ್ರಿಯ; ವರ್ಣಿಸಿ ವರ್ಣಿಸಿ ನಿತ್ಯ ಕೃತ್ಯ. ಧರ್ಮಕೆ ಅಧರ್ಮವೆ ಬುಡ ಅಂಕರೂಪು ಮಾಳ್ಪುದು ನಿರ್ಮಳ ನಿರಾಧಿ ನಿರ್ಧರ ನಿತ್ಯಂಗೆ ನಿರ್ಮೋಹಿ ಮೋಹಿ ನಿಮಿಷ ಜ್ಞಾನಿ ಅಜ್ಞಾನಿ ನಿಮಿತ್ಯ ಕಲ್ಪನೆ ನಿರೂಪು ರೂಪು ಭುಕ್ತಿ ಭಕ್ತಿ ಕರ್ಮಿಗಳೆಂದು ಕಾಬುದೆ ಕರುಣ ಕೃಪೆ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.