Index   ವಚನ - 76    Search  
 
ದಾನಧರ್ಮ ಪರೋಪಕಾರ ದಯ ದಾಕ್ಷಿಣ್ಯ ದೀನತನದಲಿ ಗಳಿಸುವುದು ಸ್ವಯ. ನಿರ್ದಯ ದಾಕ್ಷಿಣ್ಯ ಮಾನೀಶಗ್ಯಾತಕು? ದಾನಧರ್ಮ ಪರೋಪಕಾರ ಅನಂತ ಕಲ್ಪನೆಗೆ ಕೊಟ್ಟ ಕ್ಷುಪ್ತಿತೃಪ್ತಿ ಪ್ರಾಣಕೆ ಪಡಿಯ ನಾ ನೀಡಿದೆ ನಾ ಮಾಡಿದೆನೆಂಬ ಅಹಂ ಗರ್ವದಿಂದ ನಾನಾ ದೇಹಮೆ ಪ್ರಾಪ್ತಿ. ನಾನಾ ಯೋನಿಗೆ ಸ್ನಾನ ದೇಹವ ತಾಳಿ ಬಂದು ಕೂಟಮಾಟದೊಳು ಮುಖದಿರುಗಿದಂತೆ ಏನ ಮಾಡಿದರಿಲ್ಲ ನಿನ್ನ ಕೃಪೆಯಿಲ್ಲದೆ. ನಾನುಯೆಂಬ ಜಲ್ಮ ನರಕ ತಪ್ಪದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.