Index   ವಚನ - 84    Search  
 
ತೆಂಗು ತಿಳಿದಂತೆ ಅಂತರಂಗವ ತಿಳಿವರು ಕಣ್ಣು ಮೂರುಳ್ಳವರು. ಬಾಹಿರಂಗಕ್ಕೆ ಉಂಬರೆ ಲಿಂಗವೆ ಒಡಲಾಗಿ ನಿರತಂಗವೆ ಅಡಿಯಾಗಿ ಸಂಗಂಗೆ ಸಮರ್ಪಿಸಬಲ್ಲಾತ ಸರ್ವಾಂಗಲಿಂಗಮಯ. ಬಂಗಾರದೊಳು ಮೃದು ಕುಂದಣ ಕಟ್ಟಾಳು ಕೀಳು ಆದಂತೆ ತನ್ನ ಅಂತರಂಗವ ತಿಳಿವುದೆ ಕಾರಣ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.